Skip to main content

Posts

ಪ್ರಕೃತಿ ಮಾತೆಯ

ವದನ

 ಚಿಕ್ಕದೊಂದು ನಗು ದೊಡ್ಡದಾದ ಆಭರಣ,  ಇರಲಿ ಅದು ಸದಾ ಸಾಧಾರಣ. ಮುದ್ದಾದ ವದನಕೊಂದು ಒಪ್ಪ ಓರಣ. ನೀವೇ ಒಲುಮೆಯ ಹೊಂಗಿರಣ.
Recent posts

162 ರ ಬಾಷ್ ನೆನಪು,

 162 ರ ಬಾಷ್ ನೆನಪು, ವಿಶ್ವದೆಲ್ಲೆಡೆ ಅದೇ ಹೊಳಪು ಬೊಕ್ಕ ತಲೆ ಬಿಳಿಯಗಡ್ಡ ಜೊತೆಗೆ ದೊಡ್ಡ ಮೀಸೆ ಯಾವಾಗಲೂ ನೋಡಲೇಬೇಕೆಂಬ ಆಸೆ ರಾಬರ್ಟ್ ಬಾಷ್ ಎಂಬ ವ್ಯಕ್ತಿ ಬಿತ್ತಿದ  ಬೀಜ ಇಂದು ಹರಡಿದೆ ವಿಶ್ವ ವ್ಯಾಪ್ತಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಬದುಕು ಬೆಸೆದು ಕಟ್ಟಿ ಕೊಂಡಿಹರು ನಾನೇ ಒಬ್ಬ ನೀನೇ ಒಬ್ಬ  ನಮ್ಮೆಲ್ಲರ ಬದುಕಿಗೆ ಅವರೇ ದಾರಿದೀಪ ಅಂದು ಇಳಿದರು ಈ ಕೆಲಸಕ್ಕೆ ಕಷ್ಟ ಪಟ್ಟು ಹೆಚ್ಚು ಹೆಚ್ಚು ಕಲಿಯಲಿಕ್ಕೆ ಗ್ರಾಹಕರು ಕೇಳಿದ ಮಟ್ಟಿಗೆ ವಸ್ತುಇರಲಿ ಹಿಂತಿರುಗಿ ನೋಡಲಿಲ್ಲ ಮತ್ತಾವುದಕ್ಕಾಗಲಿ ಮಾತಿಗಿಂತ ಕೆಲಸಕ್ಕೆ, ಲಾಭಕಿಂತ ಗುಣಮಟ್ಟಕ್ಕೆ ಹಣಕ್ಕಿಂತ ಗ್ರಾಹಕರು ಅವರೇ ನಮ್ಮ ದೇವರು ಇದೇ ಬಾಷ್ ರವರ ಉಸಿರು ವಿಚಾರವೇನೇ ಇರಲಿ ವಿಭಿನ್ನ  ಉತ್ಪಾದನೆ ಬರಲಿ ವಿವಿಧ ದೇಶಗಳಲ್ಲಿ ಅದೇ ಗುಣಮಟ್ಟ ತರಲಿ ಎಂದೂ ಎಣಿಸಿರಲಿಲ್ಲ ಆ ದೇಶ ಈ ದೇಶ ಕಲಿಕೆ ಹಾಗೂ ಹೊಸತನ ಅವರ ವಿಶ್ವಾಸ ಅವರಿಗೆ ವಿಶ್ವವೇ ಅವರ ಪ್ರದೇಶ ಯಾವುದೂ ಆಗಿರಲಿಲ್ಲ ಪರದೇಶ ಇಂದಿನ ನಮ್ಮ ಜೀವನ ಅಂದಿನ ಅವರ ಜೀವದಾನ ನಮ್ಮೆಲ್ಲರ ಹೆಮ್ಮೆಯ ಬಾಷ್ ಚಿರಕಾಲ ಉಳಿಯಲಿ ನಿಮ್ಮ ನೆನಪು ಬಿಂದಾಸ್ 162ನೆನಪಲ್ಲಿ ಬಾಷ್ 27 ಬಾಷ್ ನ ಸೇವೆಯಲ್ಲಿ ಭಾವುಕನಾಗಿ ಅಂತರಾಳ ಕಾಂತರಾಜು E. No. 30727893 PS/QMC - IN

ರಹದಾರಿಯ ಹೆದ್ದಾರಿ

 ಬಾಳೊಂದು ಹೆದ್ದಾರಿ ಜೀವನವೇ ಪಯಣದ ದಾರಿ ಎಲ್ಲೆಲ್ಲೋ ಪಯಣ ಕೊನೆಗೊಮ್ಮೆ ಮಸಣ ಕೆಲವರನ್ನು ಹಿಂದಿಕ್ಕಿ ಹಲವರನ್ನು ಮುಂದಿಕ್ಕಿ ಜೀವನದ ಆಟದಲಿ ಬಿರುಸಿನ ಓಟದಲಿ ಎಲ್ಲರಿಗಿಂತ ಮುಂದೆ ಹೋಗಲಾಗದೆ ತನಗಿಂತ ತಾನು ಹಿಂದಾಗದೆ ಮನಸೊಳಗೆ ಹಳಿಯುತ್ತಾ ಮತ್ತೊಮ್ಮೆ ಸುಳಿಯುತ್ತಾ ಮುಗಿಯುತಿದೆ ಜೀವನ ಬೇರೆಯವರೇಕೆ ನಮಗೆ ಗುರಿ ನಮಗಿಲ್ಲವೇ ನಮ್ಮದೇ ದಾರಿ ಮುಂದಿನವರ ನೋಡಿ ಕೊರಗದಿರಿ ಹಿಂದಿನವರ ನೊಡಿ ಮರುಗದಿರಿ ಅವರವರೊಳಗಿದೆ ಅವರದೆ ವೇದನೆ ನಮ್ಮೊಳಗಿನ ನಮಗಿಲ್ಲವೇ ಚಿಂತನೆ ಬೇರೆಯವರ ಜೊತೆ ಹೋಲಿಕೆ ಮಾಡಿ ನಮ್ಮ ಬದುಕೇಕೆ ಆಗಬೇಕು ರಾಡಿ ರಹದಾರಿ ಇರಲಿ ಬದುಕಿನಲಿ ಎನೆಲ್ಲ ಬರಲಿ ಪಯಣದಲಿ ನಮ್ಮ ಪಾಲು ನಿಂತಿದೆ ಬೇರೆಯವರದೇಕೆ ಬೇಕಿದೆ.

ಪಶ್ಚಿಮಘಟ್ಟದ ಬಿಸ್ಲೇ ಅರಣ್ಯ

 ಹಕ್ಕಿಗಳ ಕಲರವ, ಕಂಬಗಳಿಲ್ಲದ ರಸ್ತೆ, ನಿತ್ಯ ಹರಿದ್ವರ್ಣ ಕಾಡುಗಳು ನೋಡಿದರೆ ಯಾರಿಗೆ ತಾನೆ ಇಷ್ಟವಿಲ್ಲ. ಇದು ಕನಸಲ್ಲಾ ನಿಜ ಸ್ಥಳ. ನಿಜವಾಗಿ ಅಲ್ಲಿ ನಿಂತರೆ ಪ್ರಕೃತಿಯ ಮುಂದೆ ಮಾನವ ತೃಣಸಮಾನ ಎಂಬ ಅನಿಸಿಕೆ ಬಾರದೇ ಇರದು. ಪರಿಸರ ಪ್ರಿಯರಿಗೆ, ಪ್ರಶಾಂತ ವಾತಾವರಣ ಬಯಸುವರಿಗೆ, ಚಾಲನಾ ಆನಂದ ಅನುಭವಿಸಲು ಇದೇ ಸುಂದರ ತಾಣ. ಕುಕ್ಕೆ ಸುಬ್ರಹ್ಮಣ್ಯದ ಸುಂದರ ತಾಣ ತಲುಪಲು ನೀವು ಆಯ್ಕೆ ಮಾಡಿಕೊಳ್ಳಬೇಕಾದ ರಸ್ತೆ ಬಿಸ್ಲೇ ಘಟ್ಟಗಳಲ್ಲಿ ಹಾಯ್ದು ಹೋಗುವ ದಾರಿ....... ಎಲ್ಲರಿಗೂ ಒಮ್ಮೆ ನಿಲ್ಲಿಸಿ ಮನತಣಿಸಿಕೊಳ್ಳಲೇ ಬೇಕೆನ್ನುವ ಆಸೆ ಬಾರದೆ ಇರದು. ನಿಮ್ಮ ಪ್ರಯಾಣ ಆರಂಭಿಸಿದರೆ  38ಕಿಮೀ ಕ್ರಮಿಸಲು ಬೇಕಿರುವ ಸಮಯ 75ನಿಮಿಷ. ಪರಿಸರ ಸ್ನೇಹಿ ಪರಿಸರ ಪ್ರೇಮಿ ಆದರೆ ಇದು 180ನಿಮಿಷಗಳ ಪ್ರಯಾಣ. 20ಅಡಿಯ ಅಗಲದ ರಸ್ತೆ, ಅಂಕು ಡೋಂಕಾದ ಹಾವಿನ ನಡಿಗೆಯಂತ ತಿರುವುಗಳು, ಬಾನೆತ್ತರಕ್ಕೆ ಬೆಳೆದಿರುವ ಬೆಟ್ಟ ಗುಡ್ಡಗಳ ನಡುವೆ ಎಲ್ಲರನ್ನೂ ಹಿಂದಿಕ್ಕಿ ಬೆಳೆಯುತ್ತಿರುವ ಗಗನಚುಂಬಿ ಮರಗಳು. ಅಲ್ಲಲ್ಲೇ ಸುಳಿಯುತ್ತಿರುವ ನೀರಿನ ಚಿಕ್ಕ ಪುಟ್ಟ ಝರಿಗಳು... ಹೆಚ್ಚು ಅಂದರೆ ಈ 3ಘಂಟೆಯಲ್ಲಿ 5 ವಾಹನಗಳು ನಿಮಗೆ ಸಿಗಬಹುದು. ಪ್ರಾಣಿಗಳು ಸಿಗಬಹುದು ನಿರಾತಂಕವಾಗಿ ನಿಲ್ಲಿ ಅವು ಅವರ ಪಾಡಿಗೆ ಹೋಗುತ್ತಾ ಇರುತ್ತವೆ. ನಿಜ ಎಂದರೆ ಒಂದು ಅಂಗಡಿ, ಬಸ್ ನಿಲ್ದಾಣ ಏನೂ ಸಿಗಲಾರದ ಸುಂದರ ಜಾಗವೇ ಇದು.

ಕನ್ನಡವೇ ನೆಡೆ ಕನ್ನಡವೇ ನುಡಿ

ಕನ್ನಡವೇ ಒಂದು ಕವಿತೆನಾ ನೇನು ಬರೆಯಲಿ ಕನ್ನಡಕ್ಕೆ,  ಆಡೋಣ ಹಾಡೋಣ,ಕನ್ನಡವೇ ಕನ್ನಡ,  ಕನ್ನಡವ  ಕಲಿಸೋಣ, ಕನ್ನಡವಾಗಿ ಬದುಕೋಣ. ಕನ್ನಡವೊಂದು ಹಿರಿಗರ್ಭ. ಅದರೊಳಗೂಂದು ಸಾಹಿತ್ಯ,  ಅರಿತರೆ ಆನಂದ, ಬರೆದರೆ ಕವನ,  ಹಾಡಿದರೆ ಪದ್ಯ, ಓದಿದರೆ ಗದ್ಯ ಆಡಿದರೆ ಗದಾಯುದ್ಧ. ಕುಡಿದರೆ ನೀರು, ಹರಿದರೆ ಕಾವೇರಿ  ಕಲ್ಲಾದರೆ ಬೆಲೂರ ಶಿಲೆ,  ನರ್ತಿಸಿದರೆ  ಶಾಂತಲಾ ಬೆಳೆದರೆ ಶ್ರೀಗಂಧದ ಸಾಂಬ್ರಾಣಿ ಹೋರಾಟಕ್ಕೆ ಇಳಿದರೆ ಹೋಯ್ಸಳ. ಕನ್ನಡದ್ದೇ ಇದೆ ಸ್ವಂತ ಸಂಗೀತ ಪ್ರಪಂಚ ಜನರೇ‌ ಗುನುಗಲು ಜಾನಪದ. ಭಾವಗಳ ಜೊತೆಗೆ ಹೂಮ್ಮಿದಾಗ ಭಾವಗೀತೆ. ಬೆಳಗೆದ್ದು ಹಾಡಿದರೆ ಭಕ್ತಿಗೀತೆ. ಲೇವಡೀ ಮಾಡಿದರೆ ಲಾವಣಿ. ಹೆಂಗಿದೆ ನಮ್ಮದೇ ಆದ ಸ್ವರ ವ್ಯಂಜನಗಳ ಸಾರ್ವಭೌಮತೆ. ಓಡಾಡಿ ಕುಣಿದು ಕುಪ್ಪಳಿಸಲು ಗಿರಿಶಿಖರ. ಓಡೋಡಿ ಹೋದರೆ ಸಿಗುವುದು ಸಾಗರ. ಆನಂದದಿಂದ ಸಂಭ್ರಮಿಸಿದರೆ ದಸರಾ. ಕಲಿತರೆ ಕನ್ನಡ ಇಲ್ಲವಾದರೆ ಕನ್ನಡ್. ನಮ್ಮ ಹೆಮ್ಮೆಯ ನಾಡು ಕರ್ನಾಟಕ ನಮ್ಮ ನಲ್ಮೆಯ ನುಡಿ ಕನ್ನಡ. ನೆಡೆಕನ್ನಡ, ಹೊಸಗನ್ನಡ, ನಡುಗನ್ನಡ, ಹಳಗನ್ನಡ. ಭಾವುಕನಾಗಿ ಅಂತರಾಳ ಕಾಂತರಾಜು ದೂರವಾಣಿ : ೯೭೩೯೯೩೨೬೧೫ ನನ್ನೂರು ಹಂಜಳಿಗೆ ಹುಟ್ಟಿದ್ದು ಬುಗುಡಹಳ್ಳಿ ಬೆಳೆದದ್ದು ಸಂಪಿಗೆದಾಳು ಬದುಕುತ್ತಿರುವುದು ಬೆಂದಕಾಳೂರು

ನೀನಾರು

ನಿನ್ನನು ಹೊಗಳಲು ಅಕ್ಷರಗಳು ಸಿಗುತಿಲ್ಲಾ. ನನ್ನ ಜೀವನವನ್ನು ನೀವು ಹೇಗೆ ಅಲಂಕರಿಸಿದ್ದೀರಿ, ಖುಷಿ, ಸಂಭ್ರಮ, ಸಡಗರ , ನಿದ್ರೆ ಎಲ್ಲವೂ ನೀವು ನನ್ನೊಡನೆ ಇರುವುದರಿಂದ. ನೀವು ತುಂಬಾ ನಿಷ್ಕಲ್ಮಷ ಹಾಗೂ ಉದಾರಿ, ವಿಶೇಷ ಸ್ಥಾನವನ್ನು ನೀವು ಮಾತ್ರ ತುಂಬುತ್ತೀರಿ, ನಿನ್ನನು ಹೊಗಳಲು ಪದಗಳು ಸಿಗುತಿಲ್ಲಾ. ನೀವು ಎಂದರೆ ನನ್ನ ಬದುಕಿಗೆ ಏನೆಂದು. ಮತ್ತು ಸದಾ ಸದಾ ಸದಾ ನಿಮ್ಮೋಂದಿಗೆ ನಾನು.